‘ಚಾಲಾಕಿ’ ಕಭೀರ್ ಸಿಂಗ್ ಆಗಮನ
Posted date: 01 Wed, Apr 2015 – 08:42:21 AM

ಇತ್ತೀಚಿನ ತೆಲುಗು ಚಿತ್ರ ‘ಜಿಲ್ಲ್’ (ಗೋಪಿಚಂದ್ ಅಭಿನಯ) ಹಾಗೂ ‘ಕಿಕ್’ ಸಿನೆಮಾ ಮೂಲಕ ಎಂಟ್ರಿ ಆದ ಖಳ ನಟ ಕಭೀರ್ ಸಿಂಗ್ ಈಗ ೩ನೇ ಸಿನಿಮಾ ‘ಚಾಲಾಕಿ’ ಕನ್ನಡ ಸಿನೆಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಚೋಟಾ ನಾಯಕ್ ಪಾತ್ರದಲ್ಲಿ ಅಭಿನಯಿಸಿದ ಕಭೀರ್ ಸಿಂಗ್ ಸಿನಿಮಾ ‘ಜಿಲ್ಲ್’ ಆಂಧ್ರ ಪ್ರದೇಶದಲ್ಲಿ ಜಯಭೇರಿ ಹೊಡೆಯುತ್ತಾ ಇದೆ.
ಕಭೀರ್ ಸಿಂಗ್ ಅವರು ನಾಯಕ ಪ್ರಜ್ವಲ್ ದೇವರಾಜ್ ಎದುರು ಅಭಿನಯಿಸುತ್ತಾ ಇದ್ದಾರೆ.
ಪ್ರಜ್ವಲ್ ದೇವರಾಜ್ ಅವರ ೨೫ ನೇ ಸಿನಿಮಾ ‘ಚಾಲಾಕಿ’ ನಾಯಕಿ ಆಗಿ ಸೋನಮ್ ಶೆಟ್ಟಿ ಆಯ್ಕೆ ಆಗಿದ್ದಾರೆ. ವೇಣುಗೋಪಾಲ್ ಚಿತ್ರದ ನಿರ್ದೇಶಕರು. ಪ್ರವೀಣ್ ಕುಮಾರ್ ಚಿತ್ರದ ನಿರ್ಮಾಪಕರು, ಪಿ ರಾಜನ್ ಅವರ ಛಾಯಾಗ್ರಹಣ, ಪ್ರೇಮ್ ಕುಮಾರ್ ಅವರ ಸಂಗೀತ, ದೀಪು ಅವರ ಸಂಕಲನ (ದೀಪಿ ಎಸ್ ಕುಮಾರ್ ಅಲ್ಲ) ಬಾಬು ಖಾನ್ ಅವರ ಕಲಾ ನಿರ್ದೇಶನ, ಜಾಲಹಳ್ಳಿ ನರಸಿಂಹ ಅವರ ಮೇಲ್ವಿಚಾರಣೆ ಚಿತ್ರಕ್ಕೆ ಇದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed